ಚಿತ್ರ: ಸ್ವರ್ಣ ಗೌರಿ
ಸಾಹಿತ್ಯ: ಎಸ್.ಕೆ.ಕರೀಂಖಾನ್
ಗಾಯನ: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲ

ಓಂಕಾರ ನಾದ ಸ್ವರೂಪಾ ಅ ಅ ಆ 
ಬಾಲೇಂದು ಭೂಷಣ ಕಲಾಪ
ನಿಗಮ ಭುವನ ದೀಪ
ನಟರಾಜಾ.. ನಮಾಮೀ
ನಟಾಜಾ ನಮಾಮೀ ಇ ಇ ಇ ಇ ಈ ಈ!

ನುಡಿಮನ ಶಿವಗುಣ ಸಂಕೀರ್ತನಾ! |೨|
ನಿಜಪದ ಪಾವನ ನೋಡಿ ಪಾಡುವೆನಾ |೨|
ನುಡೀಮನ ಶಿವಗುಣ ಸಂಕೀರ್ತನಾ!

ನಾಟ್ಯ ಲೀಲ ನಟನಾ ಲೋಲ..
ನೀನೆ ಭಾವ ರಸಾಲ |೨|

ಅ ಅ ಅ ಆ ನಾಟ್ಯ ಲೀಲ ನಟನಾ ಲೋಲ..
ನೀನೆ ಭಾವ ರಸಾಲ |೨|

ಕುಣಿಸುವ ಮನ ತಣಿಸುವ |೨|
ಕಮನೀಯ ಕಾಮ ಹರ ದೇವಾ ಅ ಅ ಅ ಆ
ನುಡಿಮನ ಶಿವಗುಣ ಸಂಕೀರ್ತನ!

ನಾದಸಾರ ನಿಗಮಾಕಾರ..
ನೀನೆ ಗಾನ ವಿಹಾರ |೨|

ಅ ಅ ಅ ಆ ನಾದಸಾರ ನಿಗಮಾಕಾರ..
ನೀನೆ ಗಾನ ವಿಹಾರ |೨|

ರಚನ ನೀ ಮಧು ವಚನ ನೀ |೨|
ನವರಾಗ ತಾಳ ಲಯ ತಾನ ಅ ಅ ಅ ಅ ಆ

ನುಡಿಮನ ಶಿವಗುಣ ಸಂಕೀರ್ತನಾ! 
ನಿಜಪದ ಪಾವನ ನೋಡಿ ಪಾಡುವೆನಾ |೨|
ನುಡೀಮನ ಶಿವಗುಣ ಸಂಕೀರ್ತನ!

ಗಮದನಿ ಸಾನಿದಪ ನೀದಪಮ ದಾಪಮಗರಿಸ

ಗರಿಗರಿ ಸರಿಸ ಪಮದಪ ಮಗರಿಸ
ನಿರಿಗರೀಗ ಮದಮಾ ದನಿರಿರೀಸ
ನಿಸ ದನಿದನಿ ಪದಪದ ಮಪಮಪಗ
ಸನಿರಿ ಸನಿದಪ ಮಗರಿ ನಿಸರಿ ರಿರಿನಿರಿಸ

Category: ಕನ್ನಡ ಚಿತ್ರಸಾಹಿತ್ಯ
Category: ಎಸ್.ಕೆ.ಕರೀಂಖಾನ್ ಸಾಹಿತ್ಯ
Category: ಸ್ವರ್ಣ ಗೌರಿ ಚಿತ್ರ
ವರ್ಗ: ಪಿ.ಸುಶೀಲ ಗಾಯನ
ವರ್ಗ: ಪಿ.ಬಿ.ಶ್ರೀನಿವಾಸ್ ಗಾಯನ